ನೀಯಸ್ 		- 
ಹಿಂದೂ ಸಾಗರದಲ್ಲಿ ಸುಮಾತ್ರದ ಪಶ್ಚಿಮಕ್ಕಿರುವ ದ್ವೀಪಗಳ ಸಾಲಿನಲ್ಲಿರುವ ಅತ್ಯಂತ ದೊಡ್ಡ ದ್ವೀಪ. ಉ.ಅ.1 ಮತ್ತು ಪೂ.ರೇ. ನಡುವೆ ಇದೆ. ಗುಡ್ಡಗಾಡುಗಳಿಂದ ಕೂಡಿರುವ ಈ ದ್ವೀಪ ಉತ್ತರ ಸಉಮಾತ್ರ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟಿದೆ. ದ್ವೀಪ 128 ಕಿಮೀ. ಉದ್ದ ಹಾಗೂ ಸುಮಾರು 48 ಕಿಮೀ. ಅಗಲವಾಗಿದೆ. ಇಲ್ಲಿಯ ಅತ್ಯುನ್ನುತ ಪ್ರದೇಶದ ಎತ್ತರ 886 ಮೀ. ದ್ವೀಪದ ವಿಸ್ತೀರ್ಣ 4,772 ಚ.ಕಿಮೀ. ಜನಸಂಖೆಯ 3,14,829 (1971). ಮುಖ್ಯ ಪಟ್ಟಣ ಗುನುಂಗ್ ಸಿಟೋಲಿ. ಇಲ್ಲಿಯ ಭೂಪ್ರದೇಶ ಪರ್ಶಚಿಮ ಸಉಮಾತ್ರದಂತೆಯೇ ಇದ್ದರೂ ಇಲ್ಲಿ ಜ್ವಾಲಾಮುಖಿಗಳಿಲ್ಲ. ಆದರೆ ಇಲ್ಲಿ ಭೂಕಂಪಗಳಾಗುತ್ತಿರುವುದುಂಟು. ತೀರಪ್ರದೇಶ ಬಂಡೆಗಳಿಂದಲೂ ಮರಳಿನಿಂದಲೂ ಕೂಡಿರುವುದರಿಂದ ಹಡಗುಗಳು ಇಲ್ಲಿಗೆ ಬರುವಂತಿಲ್ಲ. ನೀಯಸ್‍ನ ಮೂಲನಿವಾಸಿಗಳು ಪ್ರಾಚೀನ ಮಲಯ್ ಬುಡಕಟ್ಟಿಗೆ ಸೇರಿದರು. ಇಲ್ಲಿ ಮಲಯೋ-ಪಾಲಿನೇಷಿಯನ್ ಗುಂಪಿಗೆ ಸೇರಿದ ಭಾಷೆಯನ್ನು ಮಾತನಾಡುತ್ತಾರೆ. ಇಲ್ಲಿಯ ಪ್ರಮುಖ ಉತ್ಪನ್ನಗಳು ಕೊಬ್ಬರಿ, ಆಲೂಗೆಡ್ಡೆ, ಗೆಣಸು, ಬತ್ತ ಮತ್ತು ಮುಸುಕಿನ ಜೋಳ. ಇಲ್ಲಿಯ ಪ್ರಮುಖ ರಫ್ತು ಕೊಬ್ಬರಿ.             (ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ